ರಾಜ್ಯ ವಿರೋಧಿ ಹೇಳಿಕೆ ಕೊಟ್ಟ ಲಕ್ಷ್ಮಿ ಹೆಬ್ಬಾಳ್ಕರ್!

ರಾಜ್ಯ ದ್ರೋಹಿ ಹೇಳಿಕೆ !!
ಕ್ಷಮೆ ಯಾಚಿಸಿ ಲಕ್ಷ್ಮಿ ಹೆಬ್ಬಾಳ್ಕರ್ ಅವರೇ

ಬೆಳಗಾವಿ : ಸದಾ ಒಂದಿಲ್ಲೊಂದು ವಿವಾದದ ಮೂಲಕ ಸುದ್ದಿಯಾಗುವ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್‌ಕರ್‌ ಅವರು ಮತ್ತೊಂದು ಭಾರಿ ವಿವಾದದಲ್ಲಿ ಸಿಲುಕಿಕೊಂಡಿದ್ದು ಕನ್ನಡ ವಿರೋಧಿ ಹೇಳಿಕೆ ನೀಡಿ ಕನ್ನಡ ಪರ ಸಂಘಟನೆಗಳ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

              ಲಕ್ಷ್ಮೀ ಹೆಬ್ಬಾಳ್‌ಕರ್‌ ಅವರು ಅಗಸ್ಟ್‌ 25 ರಂದು ತಮ್ಮ ಸ್ವಕ್ಷೇತ್ರದಲ್ಲಿ ಮರಾಠಿ ಸಂಘಟನೆಯೊಂದು ಆಯೋಜಿಸಿದ್ದ ಗಣೇಶ ಚತುರ್ಥಿ ಸಂಭ್ರಮದಲ್ಲಿ  ಭಾಷಣ ಮಾಡುವ ಉದ್ವೇಗದಲ್ಲಿ '' ಎಲ್ಲದ್ದಕ್ಕೂ ಮೊದಲು ಕ್ಷೇತ್ರದ ವಿಕಾಸ ಆಗಬೇಕಾಗಿದೆ. ನಾನೀಗ ಕರ್ನಾಟಕ ನೆಲದಲ್ಲಿದ್ದೇನೆ.
ಬೆಳಗಾವಿ ಗಡಿ ವಿವಾದ ಸುಪ್ರೀಂ ಕೋರ್ಟ್‌ನಲ್ಲಿದೆ. ಕೋರ್ಟ್‌ ತೀರ್ಪು ಬಂದರೆ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರುತ್ತದೆ, ಆಗ ನಾನೇ  ಮೊದಲು ಧ್ವಜ ಹಿಡಿದು  ಜೈಕಾರ ಹಾಕುತ್ತೇನೆ.ಯಾರಿಗೂ ಈ ರೀತಿ ಹೇಳುವ ಧೈರ್ಯವಿಲ್ಲ. ನಾನು ಭಗವಂತ, ನನ್ನ ತಂದೆ, ತಾಯಿಗೆ ಮಾತ್ರ ಹೆದರುತ್ತೇನೆ '' ಎಂದು ಮರಾಠಿ ಭಾಷೆಯಲ್ಲಿ ಮಾಡಿರುವ ಭಾಷಣದ ತುಣುಕು ಇದೀಗ ವೈರಲ್‌ ಆಗಿದೆ.

ಹೇಳಿಕೆಗೆ ಕನ್ನಡ ಪರ ಸಂಘಟನೆಗಳು ತೀವ್ರ ಆಕ್ರೋಶ ಹೊರಹಾಕಿದ್ದು ಕೂಡಲೇ ಕನ್ನಡಿಗರ ಕ್ಷಮೆ ಯಾಚಿಸಬೇಕು ಎಂದು ಪಟ್ಟು ಹಿಡಿದಿದೆ.

ಪಕ್ಷದ ಮುಖಂಡರೂ ಸೇರಿದಂತೆ ರಾಜ್ಯಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಲಕ್ಷ್ಮೀ ಹೆಬ್ಬಾಳ್‌ಕರ್‌ ಕ್ಷಮೆ ಯಾಚಿಸಿದ್ದಾರೆ.
ಪರಿಶೀಲಿಸುತ್ತೇನೆ : ಪರಂ
ಹೇಳಿಕೆ ಬಗ್ಗೆ ನನಗೆ ದೂರು ಬಂದಿಲ್ಲ, ದೂರು ಬಂದಲ್ಲಿ, ಎಲ್ಲಿ ಯಾವ ಸಂದರ್ಭದಲ್ಲಿ ಹೇಳಿಕೆ ನೀಡಿದ್ದಾರೆ ಎನ್ನುವ ಕುರಿತು ಪರಿಶೀಲನೆ ನಡೆಸುವುದಾಗಿ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌ ಹೇಳಿಕೆ ನೀಡಿದ್ದಾರೆ. 

Comments